Rajahamsa, Author

ನನ್ನ ಪಯಣ

ರಾಜಹಂಸ ಅವರು ಮೂಲತಃ ಬೀದರ್ ತಾಲ್ಲೂಕಿನ ಕುತ್ತಾಬಾದ್ ಗ್ರಾಮದವರು. ಬಾಲ್ಯದಿಂದಲೇ ಸಿನಿಮಾರಂಗದ ಮೇಲೆ ಆಸಕ್ತಿ ಹೊಂದಿದ್ದ ಅವರು ನಿರ್ದೇಶಕ ಆಗಬೇಕೆಂಬ ಕನಸಿನಿಂದ ಬೆಂಗಳೂರಿಗೆ ಬಂದು ನಿರ್ದೇಶನ ತರಬೇತಿ ಪಡೆದು ಹಲವು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಸಿನಿಮಾ ಜೊತೆಗೆ ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿಯೂ ಸಕ್ರಿಯರಾಗಿದ್ದು, 2012ರಲ್ಲಿ "ಬೆಳದಿಂಗಳ ಚಂದ್ರಮ" ಕವನ ಸಂಕಲನವನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶಿಸಿದರು.

2017ರಲ್ಲಿ "ನೋಡ್ ಬೇಡ" ಕಿರುಚಿತ್ರವನ್ನು ಬರೆದು ನಿರ್ದೇಶಿಸಿದ್ದು ಜೊತೆಗೆ ನಾಯಕನಟನಾಗಿ ಅಭಿನಯಿಸಿದ್ದಾರೆ. 2018ರಲ್ಲಿ ಇಂಗ್ಲಿಷ್ ಭಾಷೆಯ ಶಾರ್ಟ್ ಫಿಲ್ಮ್ "ಸಾಲ್ವೇಶನ್" ಅನ್ನು ನಿರ್ದೇಶಿಸಿದ್ದಾರೆ.

ಪ್ರಸ್ತುತ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರೂ, ಸಿನಿಮಾ, ಸಾಹಿತ್ಯ ಮತ್ತು ಸೃಜನಶೀಲತೆಯ ಮೇಲಿನ ತಮ್ಮ ಕನಸುಗಳನ್ನು ನಿರಂತರವಾಗಿ ಮುಂದುವರೆಸುತ್ತಿದ್ದಾರೆ.

ನನ್ನ ಬರವಣಿಗೆಯ ಹೆಜ್ಜೆಗಳು

2012 - ಮೊದಲ ಸಾಹಿತ್ಯ ಕೃತಿಯ ಪ್ರಕಟ

ಸಾಹಿತ್ಯ ಪಯಣದ ಆರಂಭ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾಗ ನನ್ನ ಮೊದಲ ಕವನ ಸಂಕಲನ "ಬೆಳದಿಂಗಳ ಚಂದ್ರಮ" ಪ್ರಕಟವಾಗಿ, ನನ್ನ ಸಾಹಿತ್ಯಿಕ ಬದುಕಿಗೆ ಅಧಿಕೃತ ಚಾಲನೆ ದೊರಕಿತು.

2014 - ಕಾವ್ಯ ಸ್ಪರ್ಧೆಗಳು

ಸಂಪಾದಕರಾಗಿ ಮೊದಲ ಹೆಜ್ಜೆ "ಜೀವನ್ ಪ್ರಕಾಶನ" ಸಂಸ್ಥೆಯನ್ನು ಸ್ಥಾಪಿಸಿ, ರಾಜ್ಯಮಟ್ಟದ ಯುಗಾದಿ ಮತ್ತು ದಸರಾ ಕಾವ್ಯ ಸ್ಪರ್ಧೆಗಳನ್ನು ಐದು ಬಾರಿ ಯಶಸ್ವಿಯಾಗಿ ಆಯೋಜಿಸಿ, ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದೆ. "ಕಾವ್ಯಕಡಲ ಮುತ್ತುಗಳು" ಕವನ ಸಂಕಲನವನ್ನು ಸಂಪಾದಿಸಿ ಪ್ರಕಟಣೆ ಮಾಡಿದೆ.

2015 - ಸಂಪಾದಿತ ಕೃತಿಗಳು

ಈ ವರ್ಷ ಮತ್ತಷ್ಟು ಸಾಹಿತ್ಯಿಕ ಸಾಧನೆ "ಚಂದನ ಕಸ್ತೂರಿ" ಮತ್ತು "ಜೇನಹನಿಗಳು" ಕವನ ಸಂಕಲನಗಳನ್ನು ಸಂಪಾದಿಸಿ ಪ್ರಕಟಿಸಿ, ಸಮಕಾಲೀನ ಕನ್ನಡ ಕಾವ್ಯಕ್ಕೆ ಕೊಡುಗೆ ನೀಡಿದೆ.

2017 – ಸಿನಿಮಾರಂಗದಲ್ಲಿ ಮೊದಲ ಪ್ರಯತ್ನ

"ನೋಡ್ ಬೇಡ" ಎಂಬ ಕಿರುಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದೆ.

2018 – ಸಾಲ್ವೇಶನ್ ಕಿರುಚಿತ್ರ

ಎರಡನೇ ಕಿರುಚಿತ್ರ ಇಂಗ್ಲಿಷ್ ಭಾಷೆಯ ವಿಭಿನ್ನ ವಿಷಯ ಹೊಂದಿದ "Salvation" ಕಿರುಚಿತ್ರವನ್ನು ನಿರ್ದೇಶಿಸಿದೆ.

2019 - ನ್ಯೂಟನ್ ಸಿನಿಮಾ

ಪೂರ್ಣ ಪ್ರಮಾಣದ ಸಿನಿಮಾದ ಆರಂಭ "ನ್ಯೂಟನ್" ಚಿತ್ರದ ಕೆಲಸ ಆರಂಭಿಸಿ, ಟೈಟಲ್ ಲಾಂಚ್ ಯಶಸ್ವಿಯಾಗಿ ನಡೆಸಲಾಯಿತು.

2020 - ಹೊಸ ತಿರುವು

ಅನಿರೀಕ್ಷಿತ ತಿರುವು ಕೊರೋನಾ ಮಹಾಮಾರಿಯಿಂದ "ನ್ಯೂಟನ್" ಸಿನಿಮಾ ಮಧ್ಯದಲ್ಲೇ ನಿಂತುಹೋಯಿತು.

2026 - ಮೊದಲ ಕಾದಂಬರಿ ಕ್ರಯೋನಿಕ್ಸ್ ಪ್ರಕಟ

ಕನ್ನಡ ಸಾಹಿತ್ಯ ಲೋಕದಲ್ಲಿ ಮೊದಲ ಬಾರಿಗೆ ಹೊಸ ರೀತಿಯ ಪ್ರಯತ್ನಕ್ಕೆ ಕೈ ಹಾಕಿದ್ದು, ಮೊದಲ ಬಾರಿಗೆ ಕಾದಂಬರಿಯನ್ನು ವಿಡಿಯೋ ರೂಪದಲ್ಲಿ ಪ್ರಕಟಿಸುವ ಪ್ರಯತ್ನವಿದು.